ಪ್ರಿಯ ಗೆಳೆಯರೇ,
ಜೀವನ ಎಷ್ಟು ಸುಂದರವಾದದ್ದು! ಕೆಲವೊಮ್ಮೆ ತುಂಬಾ ಸೋಜಿಗ ಎಂದೆನಿಸುತ್ತದೆ. ಕೆಲವೊಮ್ಮೆ ತುಂಬಾ ಕ್ಷುಲ್ಲಕವೂ ಎಂದೆನಿಸುತ್ತದೆ. ಜೀವನದ ಅರ್ಥ ಅದೇನೇ ಇರಲಿ, ನಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳು ಅಜರಾಮರವಾಗಿರುತ್ತವೆ. ಬಾಲ್ಯದ ನೆನಪುಗಳೇ ಸಾಕು. ನಮ್ಮ ದೇಹದಲ್ಲಿ ವಿದ್ಯುತ್ ಪ್ರವಹಿಸಲು. ಅಮ್ಮ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ ಬಿಟ್ಟರೆ ಸಾಕು ಕೆಲವೇ ನಿಮಿಷಗಳಲ್ಲಿ ಮಣ್ಣಿನಲ್ಲಿ ಆಟವಾಡಿ, ತಲೆಗೆ ಮಣ್ಣು ಮೆತ್ತಿಕೊಳ್ಳುತ್ತಿದ್ದುದು, ಬೇರೆ ಗೆಳೆಯರ ತಲೆ ಮೇಲೆ ಮಣ್ಣು ಸುರಿಯುತ್ತಿದ್ದುದು ಒಂದೇ, ಎರಡೇ? ಆಹಾ! ಮಧುರ ಮಧುರವೀ ಬಾಲ್ಯದ ನೆನಪು ಎನಿಸದಿರದು.
ನೆನಪುಗಳು ನಾವು ನಡೆದು ಬಂದ ಹಾದಿಯನ್ನು ಅವಲೋಕಿಸಲು ಇರುವ ಡಿ.ವಿ.ಡಿ.ಗಳು. ಕೆಲವು ನೆನಪುಗಳೋ ಬೆಂಬಿಡದೆ ಕಾಡುತ್ತವೆ. ಕೆಲವು ನೆನಪುಗಳು ನಮ್ಮ ಮೇಲೆ ಹೆಮ್ಮೆಯ ಭಾವನೆಯುಂಟು ಮಾಡಿದರೆ ಮತ್ತೆ ಕೆಲವು ತುಚ್ಛ ಭಾವನೆಯನ್ನುಂಟು ಮಾಡುತ್ತದೆ. ನೆನಪುಗಳು ಬಂದಾಗ ಮನಸ್ಸು ಕೆಲವೊಮ್ಮೆ ಉಲ್ಲಸಿತವಾಗುತ್ತದೆ, ಕೆಲವೊಮ್ಮೆ ದುಃಖ ಉಮ್ಮಳಿಸಿ ಬರುತ್ತದೆ. ನೆನಪುಗಳೇ ಹಾಗೆ. ಕಾದ ಕಬ್ಬಿಣದ ಮೇಲೆ ಮುದ್ರೆ ಒತ್ತಿದಂತೆ ಅಚ್ಚಳಿಯದೆ ಉಳಿದು ಬಿಡುತ್ತದೆ.
ಮೊನ್ನೆ ಏನೋ ತಡಕಾಡುತ್ತಿರಬೇಕಾದರೆ ನನ್ನ ಗೆಳೆಯರು ಬರೆದ ಪತ್ರಗಳು ಸಿಕ್ಕವು. ಮತ್ತದೇ ಬಾಲ್ಯದ ನೆನಪಿನ ಲೋಕಕ್ಕೆ ಕರೆದೊಯ್ಯಿತು. ಗೆಳೆಯರು ಬರೆದ ಹಳೆಯ ಪತ್ರ ಸಿಕ್ಕಿದಾಗ ಆಗುವ ಖುಷಿ ಹೇಳತೀರದು. ಅದರಲ್ಲೂ ಹತ್ತಿಪ್ಪತ್ತು ವರ್ಷ ಹಿಂದಿನ ಪತ್ರಗಳು ಸಿಕ್ಕರಂತೂ ಪ್ರಾಚೀನ ಶಾಸನ ಸಿಕ್ಕಷ್ಟೇ ಹಾಗೂ ಅಷ್ಟೇ ಜೋಪಾನವಾಗಿ ಅವುಗಳನ್ನು ಎತ್ತಿಡುತ್ತೇವೆ. ನೆನಪುಗಳು ಕಾಡಿದಾಗ ಪುನಃ ಪುನಃ ಓದುತ್ತೇವೆ.
ಹಾ! ಗೆಳೆಯರೇ, ಈ ಪತ್ರಗಳು ಇಂದು ಮೂಲೆ ಗುಂಪಾಗುತ್ತಿರುವುದು ಖೇದಕರ ಸಂಗತಿ. ಮೊಬೈಲ್ ದಾಳಿ ಮಾಡಿ ಪತ್ರದ ಸ್ಥಾನವನ್ನು ಕಬಳಿಸಿ ಬಿಟ್ಟಿದೆ. ಆ ಕಾಗದದಲ್ಲಿ ಬರೆಯುತ್ತಿದ್ದ ಒಕ್ಕಣೆ, ಅವರ ಯೋಗಕ್ಷೇಮದ ವಿಚಾರಣೆ, ವಿವರಣಾ ವರದಿ, ‘ಮನೆ - ಮಂದಿಯನ್ನು ಕೇಳಿದೆ ಎಂದು ಹೇಳು’ ಎಂದು ಬರೆಯುವುದು ನಿಜವಾಗಿಯೂ ಒಂದು ಅದ್ಭುತ ಹಾಗೂ ಸುಂದರವಾದ ಅನುಭವ. ‘ಪತ್ರವನ್ನು ಬರೆದಿದ್ದೇನೆ ಓದು’ ಎಂದು ಗೆಳೆಯ ಹೇಳಿದಾಗ ಆ ಪತ್ರ ಬರುವುದನ್ನೇ ಕಾಯುವಲ್ಲಿಯ ಕಾತರ, ನಂತರ ಆ ಪತ್ರಕ್ಕೆ ಉತ್ತರ ಬರೆಯುವುದು. ಇಬ್ಬರು ಗೆಳೆಯರ ನಡುವಿನ ಪತ್ರ ಸಂಭಾಷಣೆಯು ಎಷ್ಟು ಅರ್ಥಪೂರ್ಣವಾಗಿ ಸಾಗುತ್ತಿತ್ತು. ಪತ್ರವನ್ನು ಬರೆಯ ಬೇಕೆಂದರೆ ಇಂಥವರಿಗೆ ಇಂಥದ್ದೇ ಒಕ್ಕಣೆ ಬರೆಯಬೇಕೆಂಬ ರೂಢಿಯಿದೆ. ಆದರೆ ಈಗಿನ ಮೊಬೈಲ್ ಯುಗದಲ್ಲಿ ಈ ಒಕ್ಕಣೆಗಳು ಶಬ್ದ ಭಂಡಾರದಲ್ಲಷ್ಟೇ ಉಳಿದಿದೆ ಎಂದೆನಿಸುತ್ತದೆ.
ಗೆಳೆಯರ ಜೀವನದ ಅಮೂಲ್ಯ ಗಳಿಗೆಗಳನ್ನು ಪತ್ರದಲ್ಲಿ ಬರೆದಿದ್ದರೆ ಎಂದೋ ನಮ್ಮ ಮಕ್ಕಳಿಗೆ ‘ಹೀಗೆ ನಾವು ಗೆಳೆಯರು ಪತ್ರ ಮುಖೇನ ಸಂಭಾಷಿಸುತ್ತಿದ್ದೆವು’ ಎಂದು ತೋರಿಸುವುದಕ್ಕೆ ಪುರಾವೆಯಾಗುತ್ತವೆಯಲ್ಲವೇ?
ನಿಜವಾಗಿಯೂ ಪತ್ರಗಳು ನೆನಪಿನ ಪುರಾವೆಗಳು ಎಂದೆನಿಸುವುದಿಲ್ಲವೇ? ಎಂದೋ ತೆಗೆಸಿದ ಫೋಟೋ ಎಂದೋ ಯಾರನ್ನೋ ನೋಡಿದಾಗ ಗೀಚಿದ ಕವನ, ನೋಟ್‌ಪುಸ್ತಕದ ಮೊದಲ ಪುಟದಲ್ಲಿ ಗೆಳೆಯನಿಂದ ಬರೆಸಿದ ಹೆಸರು, ಹೈಸ್ಕೂಲ್ ಪ್ರಗತಿ ನೋಟ ಇನ್ನೂ ಹತ್ತು - ಹಲವಾರು ವಸ್ತುಗಳು ಕೈಗೆ ಸಿಕ್ಕಾಗ ಆಯಾ ಕಾಲಘಟ್ಟದೊಳಗೆ ನಮಗರಿವಿಲ್ಲದೆಯೇ ಅಂತರ್ಮುಖಿಯಾಗಿ ಬಿಡುತ್ತೇವೆ.
ಹೌದು ಅಂತರ್ಮುಖಿಯಾಗಿ ಬಿಡುತ್ತೇವೆ. ಇಂತಹ ಅಂತರ್ಮುಖಿ ಮಾಡುವ ಶಕ್ತಿಯಿರುವ ನೆನಪುಗಳ ಮೂಟೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುವುದು ಸಾಮಾನ್ಯ. ಆದರೆ ನೆನಪುಗಳೇ ಜೀವನವಾಗಬಾರದು. ಹಿಂದಿನ ಘಟನೆಗಳ ಅವಲೋಕನಕ್ಕೆ ಹಾಗೂ ಸಾಧಕ - ಬಾಧಕಗಳ ತೀರ್ಮಾನಕ್ಕೆ ನೆನಪುಗಳನ್ನು ಸೀಮಿತವಾಗಟ್ಟುಕೊಂಡು ನಮ್ಮ ಭವಿತವ್ಯದ ಹೆಜ್ಜೆ ಹಾಕುವುದು ಜಾಣರ ಲಕ್ಷಣ.
ನೆನಪಿನ ದೊಣಿಯಲ್ಲಿ ಪ್ರತಿಯೊಬ್ಬರೂ ಪಯಣಿಸಿರುತ್ತಾರೆ. ಅಂತಹ ನೆನಪನ್ನು ಪುನಃ ಪುನಃ ನೆನಪಿಸುವ ವಸ್ತುಗಳನ್ನು ಜೋಪಾನವಾಗಿ ಎತ್ತಿಟ್ಟಿದ್ದೀರಿ ತಾನೆ?
-ನಿಮ್ಮ ಪ್ರೀತಿಯ ಗೆಳೆಯ
ಶ್ರೀನಿವಾಸ ಡಿ. ಶೆಟ್ಟಿ

ಬಹಳ ಚೆನ್ನಾಗಿದೆ........
ReplyDeleteYeah. A nice article. srinivas m.s.
ReplyDelete