Thursday, August 12, 2010

ನಿಮ್ಮಬಳಿ ನೆನಪುಗಳನ್ನು ಪುನಃ ಪುನಃ ನೆನಪಿಸೋ ವಸ್ತುಗಳಿವೆಯೇ?

ಪ್ರಿಯ ಗೆಳೆಯರೇ,
ಜೀವನ ಎಷ್ಟು ಸುಂದರವಾದದ್ದು! ಕೆಲವೊಮ್ಮೆ ತುಂಬಾ ಸೋಜಿಗ ಎಂದೆನಿಸುತ್ತದೆ. ಕೆಲವೊಮ್ಮೆ ತುಂಬಾ ಕ್ಷುಲ್ಲಕವೂ ಎಂದೆನಿಸುತ್ತದೆ. ಜೀವನದ ಅರ್ಥ ಅದೇನೇ ಇರಲಿ, ನಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳು ಅಜರಾಮರವಾಗಿರುತ್ತವೆ. ಬಾಲ್ಯದ ನೆನಪುಗಳೇ ಸಾಕು. ನಮ್ಮ ದೇಹದಲ್ಲಿ ವಿದ್ಯುತ್ ಪ್ರವಹಿಸಲು. ಅಮ್ಮ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ ಬಿಟ್ಟರೆ ಸಾಕು ಕೆಲವೇ ನಿಮಿಷಗಳಲ್ಲಿ ಮಣ್ಣಿನಲ್ಲಿ ಆಟವಾಡಿ, ತಲೆಗೆ ಮಣ್ಣು ಮೆತ್ತಿಕೊಳ್ಳುತ್ತಿದ್ದುದು, ಬೇರೆ ಗೆಳೆಯರ ತಲೆ ಮೇಲೆ ಮಣ್ಣು ಸುರಿಯುತ್ತಿದ್ದುದು ಒಂದೇ, ಎರಡೇ? ಆಹಾ! ಮಧುರ ಮಧುರವೀ ಬಾಲ್ಯದ ನೆನಪು ಎನಿಸದಿರದು.